Posts

Showing posts from May, 2018

ಕರ್ನಾಟಕದಲ್ಲಿ ಕಂಡುಬರುವ ಚಿಟ್ಟೆಗಳು - (Butterflies found in Karnataka)

Image
ಕಾಮನ್ ಇಂಪೀರಿಯಲ್ (Common Imperial) ವೈಜ್ಞಾನಿಕ ಹೆಸರು - ಚೆರಿತ್ರ ಫ್ರೆಜ ಇದು ಬ್ಲೂಸ್ ಜಾತಿಯ ಚಿಟ್ಟೆ . ಇವುಗಳು ಬಲು ಸುಂದರವಾದ ಸಾಮಾನ್ಯ ಗಾತ್ರದ ಚಿಟ್ಟೆಗಳು. ಈ ಚಿಟ್ಟೆಗಳು ಭಾರತ, ಶ್ರೀಲಂಕಾ, ಮಲೇಷಿಯಾ ಹಾಗು ಮಯನ್ಮಾರ್ ದೇಶಗಳಲ್ಲಿ ಕಂಡುಬರುತ್ತವೆ. ಈ ಚಿಟ್ಟೆಗಳನ್ನು ನಗರ ಪ್ರದೇಶಗಳಲ್ಲಿ ನೋಡಲು ಸಾಧ್ಯವಿಲ್ಲ. ಇವುಗಳನ್ನು ನೋಡಬೇಕೆಂದರೆ   ಮಲೆನಾಡಿನ ಕಾಡುಗಳಿಗೇ ಹೋಗಬೇಕು. ಈ ಚಿಟ್ಟೆಗಳು ಬಹಳ ವೇಗವಾಗಿ ಹಾರುತ್ತವೆ. ಇವುಗಳ ರೆಕ್ಕೆಯ ಅಗಲ ಸುಮಾರು ೨೮-೪೨ಮಿಲಿ ಮೀಟರ್ ನಷ್ಟಿರುತ್ತದೆ. ಇವುಗಳ ರೆಕ್ಕೆಯ ಕೆಳಭಾಗವು ಬಿಳಿ ಬಣ್ಣದಿಂದ ಕೂಡಿರುತ್ತದೆ ಹಾಗು ರೆಕ್ಕೆಯ ಮೇಲ್ಭಾಗವು ನೀಲೀ ಮಿಶ್ರಿತ ಕಂದು ಬಣ್ಣವನ್ನು ಹೊಂದಿರುತ್ತದೆ.   ಕೆಳಭಾಗದ ರೆಕ್ಕೆಯ ಹಿಂಬದಿಯಲ್ಲಿ ಕಪ್ಪು ಪಟ್ಟೆಗಳಿದ್ದು, ಹಿಂಬದಿಯ ಅಂಚಿನಲ್ಲಿ ಕಣ್ಣುಗಳಂತೆ ಕಾಣುವ ೨ ಕಪ್ಪು ಚುಕ್ಕೆಗಳು ಮತ್ತು ಅವುಗಳ ಮಧ್ಯದಲ್ಲಿ ಒಂದು ಸಣ್ಣ ಗಾತ್ರದ ಕಪ್ಪು ಚುಕ್ಕೆಯನ್ನು ನಾವು ಕಾಣಬಹುದು. ಈ ಚಿಟ್ಟೆಗಳಿಗೆ ಅವುಗಳ ದೇಹದಷ್ಟೆ ಉದ್ದವಾದ ೨ ಬಾಲಗಳಿರುತ್ತವೆ. ದಾಂಡೇಲಿ ಅರಣ್ಯ ಪ್ರದೇಶದಲ್ಲಿರುವ ಸಾತೊಡ್ಡಿ ಜಲಪಾತದ ಬಳಿ ಈ ಚಿಟ್ಟೆಯನ್ನು ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದೆ. ವಿಶೇಷ ಮಾಹಿತಿ:   ಇವುಗಳ ಕೆಳಭಾಗದ ರೆಕ್ಕೆಯಲ್ಲಿರುವ ೨ ಕಪ್ಪು ಚುಕ್ಕೆಗಳು ಇವುಗಳ ಕಣ್ಣಿನಂತೆ ಹಾಗು ಬಾಲಗಳು ಮೀಸೆಯಂತೆ ಕಾಣುತ್ತವೆ. ಈ ಚಿಟ್ಟೆಗಳನ್ನು ತಿ...